ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಭಾರತದ 'ಆಸ್ಕರ್‍'ಗೆ ಹೋಲಿಸುತ್ತಾರೆ.೧೯೫೩ ರಿಂದ ಕೊಡುತ್ತಿರುವ ಈ ಪ್ರಶಸ್ತಿ ಇಂದಿಗೂ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ರಾಷ್ಟ್ರಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬ ಕಲಾವಿದ, ತಂತ್ರಜ್ಞಾನ ಕನಸುಗಳಲ್ಲೊಂದು ಎಂದರೆ ತಪ್ಪಾಗಲಾರದು. == ಇತಿಹಾಸ == ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ೧೯೫೪ರಲ್ಲಿ ಕೊಡಲಾಯಿತು. ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವುದಕ್ಕಾಗಿ ದೇಶದಾದ್ಯಂತ ತಯಾರಾದ ಚಲನಚಿತ್ರಗಳನ್ನು ಗುರುತಿಸಿ ಭಾರತ ಸರ್ಕಾರ ಗೌರವಿಸುತ್ತದೆ. ೧೯೭೩ರಿಂದ ಭಾರತೀಯ ಚಲನಚಿತ್ರ ಪ್ರಶಸ್ತಿ ನಿರ್ದೇಶನಾಲಯವು ಈ ಪ್ರಶಸ್ತಿ ಸಮಾರಂಭವನ್ನು ಆಯೋಜಿಸುತ್ತಿದೆ. == ಆಯ್ಕೆ ಸಮಿತಿ ಮತ್ತು ನೀತಿಗಳು == ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಮುಖವಾಗಿ ಎರಡು ಮುಖ್ಯ ವಿಭಾಗಗಳಲ್ಲಿ ನೀಡಲಾಗುತ್ತದೆ. ಪೂರ್ಣ ಪ್ರಮಾಣದ ಚಲನಚಿತ್ರಗಳು ಮತ್ತು ಕಿರುಚಿತ್ರಗಳು. ಭಾರತೀಯ ಚಲನಚಿತ್ರ ಪ್ರಶಸ್ತಿ ನಿರ್ದೇಶನಾಲಯವು 'ಆಯ್ಕೆ ಸಮಿತಿ'ಯನ್ನು ನೇಮಕ ಮಾಡುತ್ತದೆ. ನಿರ್ದೇಶನಾಲಯವಾಗಲಿ ಅಥವಾ ಭಾರತ ಸರ್ಕಾರವಾಗಲಿ ಯಾವುದೇ ಚಲನಚಿತ್ರದ ಆಯ್ಕೆಗಾಗಿ, ಅಥವಾ ಪ್ರಶಸ್ತಿಗಾಗಿ ಪ್ರಭಾವ ಬೀರುವಂತಿಲ್ಲ. ಆಯ್ಕೆ ಸಮಿತಿಯು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುತ್ತದೆ. ಪ್ರತೀ ವರ್ಷ ನೂರಕ್ಕಿಂತಲೂ ಹೆಚ್ಚಿನ ಚಲನಚಿತ್ರಗಳು ಎರಡೂ ವಿಭಾಗಗಳಲ್ಲಿ ಆಯ್ಕೆಯಾಗುತ್ತವೆ. ಪ್ರತೀ ವರ್ಷ ಬದಲಾಗುತ್ತಿರುವ ನೀತಿಗಳನ್ನು ಒಳಗೊಂಡ ದಾಖಲೆಯನ್ನು, 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಿಯಮಗಳು' ಎಂದು ಕರೆಯುತ್ತಾರೆ. ಒಂದು ಚಲನಚಿತ್ರ ಅರ್ಹತೆ ಪಡೆಯಲು ಹಲವಾರು ನಿಬಂಧನೆಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ, ಚಲನಚಿತ್ರ ನಿರ್ಮಾಪಕರು ನೇರವಾಗಿ ಭಾಗಿಯಾಗಿದ್ದು, ನಿರ್ದೇಶಕ ಭಾರತೀಯನಾಗಿರಬೇಕು. ಸ್ಪರ್ಧೆಯಲ್ಲಿ ಆಯ್ಕೆಯಾಗುವ ಚಲನಚಿತ್ರ ಭಾರತದಲ್ಲಿಯೇ ನಿರ್ಮಾಣ ಮಾಡಿರಬೇಕು ಮತ್ತು ಒಂದು ವೇಳೆ ವಿದೇಶಿ ಸಹ-ನಿರ್ಮಾಣದಿಂದ ಕೂಡಿದ್ದಲ್ಲಿ ಆರು ಷರತ್ತುಗಳನ್ನು ಪೂರೈಸಿದ್ದಲ್ಲಿ ಆಯ್ಕೆಗೆ ಅರ್ಹವಾಗುತ್ತದೆ. ನಿಯಮಗಳ ಪ್ರಕಾರ, ಆಯ್ಕೆ ಸಮಿತಿಗೆ ಬರುವ ಚಲನಚಿತ್ರ 'ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್'ನಿಂದ ಜನವರಿ ೧ರಿಂದ ಡಿಸೆಂಬರ್ ೩೧ರ ಒಳಗೆ ಧ್ರಡೀಕರಣಗೊಂಡಿರಬೇಕು. ಪೂರ್ಣ ಪ್ರಮಾಣದ ಚಲನಚಿತ್ರಗಳು ಮತ್ತು ಕಿರುಚಿತ್ರಗಳ ವಿಭಾಗಕ್ಕೆ ಆಯ್ಕೆ ಮತ್ತು ಆಯ್ಕೆಯಾಗದ ಚಲನಚಿತ್ರಗಳ ಪಟ್ಟಿಯನ್ನು ಆಯ್ಕೆ ಸಮಿತಿಯೇ ನಿರ್ಧರಿಸುತ್ತದೆ. == ಪ್ರಶಸ್ತಿಗಳು == ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ; ಪೂರ್ಣ ಪ್ರಮಾಣದ ಚಲನಚಿತ್ರ, ಕಿರುಚಿತ್ರ ಮತ್ತು ಉತ್ತಮ ಚಲನಚಿತ್ರ ಬರವಣಿಗೆ. ಎಲ್ಲಾ ಪ್ರಶಸ್ತಿಗಳು ಅದರದ್ದೇ ಆದ ಉದ್ದೇಶವನ್ನು ಹೊಂದಿದ್ದು, ಸಮಾಜಿಕ ಕಳಕಳಿ, ದೇಶದಲ್ಲಿನ ವಿವಿಧ ಪ್ರದೇಶದ ಕಲೆ ಮತ್ತು ಸಂಸ್ಕೃತಿ, ತಂತ್ರಜ್ಞಾನದ ಬಳಕೆಯನ್ನು ಹೊಂದಿದ್ದು ಭಾರತದ ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವಂತಿರಬೇಕು. == ಕನ್ನಡಕ್ಕೆ ಈವರೆಗೂ ಸಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿವರವಾದ ಪಟ್ಟಿ == (ಇಲ್ಲಿ ಕೇವಲ ಚಲನಚಿತ್ರ, ಚಲನಚಿತ್ರ ಸಾಹಿತ್ಯಗಳಿಗೆ ಸಂಬಂಧಪಟ್ಟ ಮಾಹಿತಿ ಮಾತ್ರ ಇದೆ, ಕಿರುಚಿತ್ರಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲ.) === ೧. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ === === ೨. ಶ್ರೇಷ್ಠ ಚಲನಚಿತ್ರ === === ೩. ಶ್ರೇಷ್ಠ ನಿರ್ದೇಶನ === === ೪. ಶ್ರೇಷ್ಠ ಸಂಪೂರ್ಣ ಮನರಂಜನಾ ಚಿತ್ರ === === ೫. ಶ್ರೇಷ್ಠ ಮಕ್ಕಳ ಚಿತ್ರ === === ೬. ನಿರ್ದೇಶಕರ ಚೊಚ್ಚಲ ಶ್ರೇಷ್ಠ ಚಿತ್ರ === ಇಲ್ಲಿಯವರೆಗೂ ಈ ಪುರಸ್ಕಾರ ಕನ್ನಡಕ್ಕೆ ಸಂದಿಲ್ಲ. === ೭. ಶ್ರೇಷ್ಠ ಆನಿಮೇಶನ್ ಚಿತ್ರ === ಇಲ್ಲಿಯವರೆಗೂ ಈ ಪುರಸ್ಕಾರ ಕನ್ನಡಕ್ಕೆ ಸಂದಿಲ್ಲ. === ೮. ಶ್ರೇಷ್ಠ ನಟ === === ೯. ಶ್ರೇಷ್ಠ ನಟಿ === === ೧೦. ಶ್ರೇಷ್ಠ ಪೋಷಕ ನಟ === === ೧೧. ಶ್ರೇಷ್ಠ ಪೋಷಕ ನಟಿ === ಇಲ್ಲಿಯವರೆಗೂ ಈ ಪುರಸ್ಕಾರ ಕನ್ನಡಕ್ಕೆ ಸಂದಿಲ್ಲ. === ೧೨. ಶ್ರೇಷ್ಠ ಬಾಲ ಕಲಾವಿದ / ಬಾಲ ಕಲಾವಿದೆ === === ೧೩. ಶ್ರೇಷ್ಠ ಸಂಗೀತ ನಿರ್ದೇಶನ === === ೧೪. ಶ್ರೇಷ್ಠ ಹಿನ್ನೆಲೆ ಗಾಯಕ === === ೧೫. ಶ್ರೇಷ್ಠ ಹಿನ್ನೆಲೆ ಗಾಯಕಿ === === ೧೬. ಶ್ರೇಷ್ಠ ಸಾಹಿತ್ಯ (ಗೀತರಚನೆ) === === ೧೭. ಶ್ರೇಷ್ಠ ಕಲಾ ನಿರ್ದೇಶನ === === ೧೮. ಶ್ರೇಷ್ಠ ಶಬ್ದಗ್ರಹಣ === === ೧೯. ಶ್ರೇಷ್ಠ ನೃತ್ಯ ನಿರ್ದೇಶನ === === ೨೦. ಶ್ರೇಷ್ಠ ಛಾಯಾಗ್ರಹಣ === === ೨೧. ಶ್ರೇಷ್ಠ ವಸ್ತ್ರವಿನ್ಯಾಸ === === ೨೨. ಶ್ರೇಷ್ಠ ಸಂಕಲನ === === ೨೩. ಶ್ರೇಷ್ಠ ಪ್ರಸಾಧನ === === ೨೪. ಶ್ರೇಷ್ಠ ಚಿತ್ರಕಥೆ === === ೨೫. ಶ್ರೇಷ್ಠ ಸ್ಪೆಶಲ್ ಎಫೆಕ್ಟ್ಸ್ === === ೨೬. ವಿಶೇಷ ಜ್ಯೂರಿ ಪ್ರಶಸ್ತಿ === === ೨೭. ಜ್ಯೂರಿಯ ವಿಶೇಷ ಉಲ್ಲೇಖ === === ೨೮. ಶ್ರೇಷ್ಠ ಪರಿಸರ ಸಂರಕ್ಷಣಾ ಚಿತ್ರ === === ೨೯. ಶ್ರೇಷ್ಠ ಕೌಟುಂಬಿಕ ಚಿತ್ರ === === ೩೦. ಶ್ರೇಷ್ಠ ರಾಷ್ಟ್ರೀಯ ಏಕತಾ ಚಿತ್ರ === === ೩೧. ಶ್ರೇಷ್ಠ ಸಾಮಾಜಿಕ ಚಿತ್ರ === === ೩೨. ಶ್ರೇಷ್ಠ ಚಲನಚಿತ್ರ ಪುಸ್ತಕ === === ೩೩. ಶ್ರೇಷ್ಠ ಚಲನಚಿತ್ರ ವಿಮರ್ಶೆ === === ೩೪. ದ್ವಿತೀಯ ಶ್ರೇಷ್ಠ ಚಲನಚಿತ್ರ === (ಈ ಪ್ರಶಸ್ತಿಯನ್ನು ಈಗ ನಿಲ್ಲಿಸಲಾಗಿದೆ.) === ೩೫. ಶ್ರೇಷ್ಠ ಕಥಾ ಲೇಖಕ === (ಈ ಪ್ರಶಸ್ತಿಯನ್ನು ಈಗ ನಿಲ್ಲಿಸಲಾಗಿದೆ.) == ಉಲ್ಲೇಖಗಳು ==